Saturday, December 22, 2007

NSS Days...






ಉಪ್ಪಾರಪಳಿಕೆ, ಮಲವಂತಿಗೆಯ ರಸನಿಮಿಷಗಳು...

ಎನ್.ಎಸ್.ಎಸ್ ನಲ್ಲಿ ಕಳೆದ ಆ ದಿನಗಳು ಈಗಲೂ ಕಣ್ಮುಂದೆ ಸುಳಿಯುತ್ತಿದೆ.. ಹತ್ತು ದಿನದ ಶಿಬಿರಗಳ ನೆನಪುಗಳಂತೂ ಮನದಿಂದ ಮಾಸುವುದೇ ಇಲ್ಲ. ಕ್ಯಾಂಪ್ ನ ಆ ರಸನಿಮಿಷಗಳನ್ನು ನೆನೆಯುವಾಗ ಮನಸು ತುಂಬಾ ಹಿಂದಕ್ಕೋಡುತ್ತದೆ. ನಾನಾಗ ಪ್ರಥಮ ಪಿ.ಯು.ಸಿಯಲ್ಲಿದ್ದೆ. ಕಾಲೇಜಿನ ವಾತವರಣಕ್ಕೆ ಹೊಂದಿಕೊಂಡಿದ್ದ ನಾನು ಎನ್.ಎಸ್.ಎಸ್ ಎಂಬ ಕುಟುಂಬದೊಂದಿಗೂ ಬಹುಬೇಗನೆ ಹೊಂದಿಕೊಂಡಿದ್ದೆ..
ನಾನು ಭಾಗವಹಿಸಿದ ಮೊದಲ ಕ್ಯಾಂಪ್ ಉಪ್ಪರಪಳಿಕೆಯದ್ದು. ಗೆಳೆಯ ರಾಜೇಶ್ ನ ಒತ್ತಾಯಕ್ಕೆ ಮಣಿದು ಕ್ಯಾಂಪ್ ಗೆ ಹೋಗಿದ್ದೆ. ಆರಂಭದಲ್ಲಿ ಬೋರ್ ಅನಿಸಿದರೂ ದಿನಕಳೆದಂತೆ ಕ್ಯಾಂಪ್ ನ ನಿಜವಾದ ಸವಿ ಅನುಭವವಾಗತೊಡಗಿತು. ತುಂತುರು ಮಳೆಯ ನಡುವೆ ಶ್ರಮದಾನ. ಜೊತೆಗೆ ಉಳಿದ ಕೆಲಸಗಳೂ.. ನಿಜಕ್ಕೂ ಆ ಸವಿಯನ್ನು ಅನುಭವಿಸಿಯೇ ತೀರಬೇಕು. ದಿನಗಳು ಬಹುಬೇಗನೆ ಮುಂದೆಸಾಗುತ್ತಿತ್ತು. ಇನ್ನೇನು ಕ್ಯಾಂಪ್ ಮುಗಿಯಲು ಒಂದು ದಿನ ಬಾಕಿಯಿರುವಾಗ ಅಗಲುವಿಕೆಯ ನೋವು ಕಾಡತೊಡಗಿದ್ದು ಸುಳ್ಳಲ್ಲ. ಕೊನೆಯ ದಿನದ ಆ ಎನ್.ಎಸ್.ಎಸ್ ಗೀತೆ-"ಇರಲಿ ನೆನಪಿರಲಿ...." ಮರೆಯೋಕೆ ಸಾಧ್ಯವಿಲ್ಲ. ಕಣ್ಣುಗಳಲ್ಲಿ ಹನಿಗಳು ಮೂಡಿತ್ತು... ಗುರುತು ಪರಿಚಯವಿಲ್ಲದವರು ಹತ್ತು ದಿನಗಳಲ್ಲಿ ಅಷ್ಟೊಂದು ಆತ್ಮೀಯರಾಗಲು ಸಾಧ್ಯವೇ ಅನ್ನುವುದು ಅಚ್ಹರಿ ಮೂಡಿಸಿತ್ತು..

ಉಪ್ಪಾರಪಳಿಕೆಯ ಆ ಮೊದಲ ಕ್ಯಾಂಪ್ಸ್ ಇವತ್ತಿಗೂ ನನಗೆ ಅಚ್ಹುಮೆಚ್ಹು.. ಹಲವಾರು ರಸನಿಮಿಷಗಳನ್ನು ನೀಡಿದ ಆ ಕ್ಯಾಂಪ್ ಮನದಿಂದ ಮರೆಯಾಗೋದು ಅಸಾಧ್ಯ....

ಮುಂದಿನ ವರ್ಷ ಮಲವಂತಿಗೆಯಲ್ಲಿ ನಡೆದ ಶಿಬಿರವು ಅವಿಸ್ಮರಣೀಯ ಎಂದರೆ ತಪ್ಪಾಗದು.. ಯಾರನ್ನೋ ಪಡೆದು, ಬಳಿಕ ಕಳೆದುಕೊಂಡ ಅನುಭವ....

ಸುನಿಲ್...

Tuesday, December 18, 2007

ಅವಳ ನೆನಪು...


ನೀನು ನನ್ನ ಬಿಟ್ಟು ಹೋದ್ರೂ ನಿನ್ನ ನೆನಪುಗಳು ನನ್ನೊಂದಿಗೆ ಇವೆ.. ಪ್ರೀತಿ, ದುಖ, ನೋವು ತುಂಬಿಕೊಂಡಿದ್ದ ನಿನ್ನ ಕಣ್ಣ ನೋಟ ನಾನ್ಯಾವತ್ತೂ ಮರೆಯಲು ಸಾಧ್ಯವಿಲ್ಲ. ಒಂದೊಮ್ಮೆ ಅತ್ತರೂ ಒಂದು ಹನಿ ಕಣ್ಣೀರು ಸುರಿಸದ ನಿನ್ನ ನೀಲ ನಯನಗಳು ನನ್ನ ಕಣ್ಣ್ಮುಂದೆ ಇದೆ. ತಿಳಿದೊ, ತಿಳಿಯದೆಯೋ ನಿನ್ನ ಕೈಯ ಸ್ಪರ್ಶದ ಗುರುತು ಇನ್ನೂ ಮಾಸಿಲ್ಲ... ನೀ ಮುಡಿದ ಮಲ್ಲಿಗೆಯ ಸುವಾಸನೆಯಂತೂ ಎಳ್ಳಷ್ಟೂ ಕಡಿಮೆಯಾಗಿಲ್ಲ... ಎಲ್ಲವೂ, ಎಲ್ಲವೂ ಇನ್ನೂ ಹಚ್ಹ ಹಸಿರಾಗೆ ಇದೆ, ಮುಸ್ಸಂಜೆಯ ಸೂರ್ಯಾಸ್ತದಂತೆ, ಮುಂಜಾನೆಯ ಸೂರ್ಯೋದಯದಂತೆ...

ಯಾಕೋ ಹುಡುಗಿ ನನ್ನ ಬಿಟ್ಟು ಹೋದೆ? ಯಾವತ್ತಾದರೂ, ಯಾವುದಾದರೂ ರೀತಿಯಲ್ಲಿ ನಾ ನಿನ್ನ ನೋಯಿಸಿದ್ದೆನಾ? ಮಾತಿನಲ್ಲಾಗಲಿ, ನೋಟದಲ್ಲಾಗಲಿ ನಿನಗೆ ನೋವುಂಟಾಗೋ ತರಹ ನನ್ನಿಂದೇನಾದರೂ ಆಗಿದೆಯ? ಇಲ್ಲ.. ನಂಗೊತ್ತು... ನಿಂಗೂ ಗೊತ್ತು...

ನೀ ಅತ್ತಾಗ ನಾ ಸಾಂತ್ವನಿಸುತ್ತಿದ್ದೆ.. ಆದ್ರೆ ಈ ಒಂದು ಸಂದರ್ಭ ಹೊರತುಪಡಿಸಿ, ಯಾವತ್ತೂ ನಾನು ಅಳೋ ಸಂದರ್ಭಾನ ನೀನು ಉಂಟು ಮಾಡಿಲ್ಲ. ಆ ತರ ನೋಡ್ಕೊಂಡೆ... ನನ್ನ ಸಂತೋಷದಲ್ಲಿ ಯಾವತ್ತೂ ಭಾಗಿಯಾದೆ.. ಈಗನಿಸ್ತಿದೆ, ಯಾವುದೂ ಬೇಕಿರಲಿಲ್ಲ ಅಂತ... ಪ್ರೀತಿ ಅಂದ್ರೇನು ಅಂತ ತೋರಿಸಿಕೊಟ್ಟ ಅದೇ ನೀನು ವಿರಹ ಅಂದ್ರೇನು ಅನ್ನೋದನ್ನೂ ತಿಳಿಸಿದೆ...

ನನ್ನೊಳಗಿನ ಕನಸುಗಳು ಮಾತ್ರ ಇನ್ನೂ ಜೀವಂತವಾಗಿದೆ.. ಎಂದಾದರೂ ನೀ ಮರಳಿ ಬರಬಹುದೆಂಬ ನಿರೀಕ್ಷೆ ನನ್ನೊಳಗಿದೆ. ನನ್ನ ನಿರೀಕ್ಷೆಗಳು, ಕನಸುಗಳು ಮುದುಡಿ ಹೋದರೂ, ನಿನ್ನ ಮೇಲಿನ ಪ್ರೀತಿ ಮಾತ್ರ ಎಂದಿಗೂ ಉಳಿದಿರುತ್ತೆ....

ಪ್ರೀತಿಯಿಂದ ಸುನಿಲ್.....