Saturday, January 21, 2012

ಮೊಗೆದಷ್ಟೂ ಮುಗಿಯದ ಪ್ರೀತಿ...

ಅವರಿಬ್ಬರೂ ಆಕಸ್ಮಿಕವಾಗಿ ಭೇಟಿಯಾಗಿದ್ದರು. ಅನಿರೀಕ್ಷಿತ ಭೇಟಿ ಅಂದ್ರೂ ತಪ್ಪಾಗದೂ.. ಮೊದಲ ಭೇಟಿಯಲ್ಲೇ ಏನೋ ಆಕರ್ಷಣೆಯಾಗ್ಲಿ, ಇನ್ನೆಂತದ್ದೋ ಖಂಡಿತ ಇರ್ಲಿಲ್ಲ. ಪರಸ್ಪರ ನೋಡಿದ್ರೂ, ಅನಿವಾರ್ಯವಾಗಿ ಮಾತಾಡಿದ್ರು. ವಾರಕ್ಕೊಮ್ಮೆ ಮನಸ್ಸಾದ್ರೆ ಫೋನ್ ಮಾಡಿ ಮಾತಾಡ್ತಿದ್ರು. ಆದ್ರೆ ಮುಂದಿನ ದಿನಗಳಲ್ಲಿ ಇಬ್ರೂ ತುಂಬಾನೇ ಕ್ಲೋಸ್ ಆಗಿಬಿಟ್ಟಿದ್ರು. ಅದು ಹೇಗೆ ಅನ್ನೋದು ನಿಜಕ್ಕೂ ಇಬ್ರಿಗೂ ಗೊತ್ತಿರ್ಲಿಲ್ಲ, ಪರಸ್ಪರ ಆಕರ್ಷಣೆಯಾಗ್ಲಿ, ಸೆಳೆತವಾಗ್ಲೀ ಇರ್ಲಿಲ್ಲ. ಒಬ್ಬರನ್ನೊಬ್ಬರು ನೆನಪಿಸಿಕೊಳ್ಳುವಂತ ಘಟನೆಯಾಗ್ಲಿ, ಅದಕ್ಕೆ ಅವಕಾಶಗಳಾಗ್ಲಿ ಇರ್ಲಿಲ್ಲ. ಆದ್ರೂ ಇಬ್ರೂ ಬಿಟ್ಟಿರೋಕಾಗದಷ್ಟು ಆತ್ಮೀಯರಾಗಿದ್ರು...


ನಾಳೆಯ ಬಗ್ಗೆ ಇಬ್ರಿಗೂ ಚಿಂತೆಯಿದೆ. ಜೀವಮಾನಪೂರ್ತಿ ಇಬ್ರಿಗೂ ಜೊತೆಯಾಗಿರೋಕೆ ಆಗಲ್ಲಾಂತ ಗೊತ್ತು. ಅದಕ್ಕೆ ಸಾಕಷ್ಟು ಕಾರಣಗಳೂ ಇವೆ.. ವಾಸ್ತವಗಳ ಅರಿವಿರೋದ್ರಿಂದ ಕನಸುಗಳು ನನಸಾಗಲ್ಲ ಅನ್ನೋದು ಇಬ್ರಿಗೂ ಗೊತ್ತಿತ್ತು.
ದಿನಗಳು ಕಳೆದು ಹೋಗ್ತಾನೇ ಇವೆ.. ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿವೆ.. ಬಳಿಕ ಇಬ್ರೂ ಬೇರೆಯಾಗ್ತೀವಿ.. ಶಾಶ್ವತವಾಗಿ... ಅದನ್ನು ಅರಗಿಸಿಕೊಳ್ಳುವ ಮನಸ್ಸಾಗ್ಲೀ, ಧೈರ್ಯವಾಗ್ಲೀ ಇಬ್ರಿಗೂ ಇಲ್ಲ.. ಆದ್ರೂ ತಮ್ಮ ಅಧೈರ್ಯವನ್ನೂ ಯಾರೂ ತೋರ್ಪಡಿಸುತ್ತಿಲ್ಲ.. ಎಲ್ಲೋ ಒಂದ್ಕಡೆ ಇಬ್ರಿಗೂ ಸಮಾಧಾನ ಆಗೋವರ್ಗೂ ಅತ್ತು ಬಿಡ್ಬೇಕು ಅನ್ಸಿದೆ.. ಆದ್ರೆ ಅದು ಕ್ಷಣಕ್ಕೆ ಮಾತ್ರ ಸಮಾಧಾನ ತಂದೀತು... ಪೂರ್ತಿ ಜೀವಮಾನಕ್ಕಲ್ಲ.. ಹಾಗಾದ್ರೆ ಇನ್ನೆಷ್ಟು ದಿನ ಹೀಗೆ ಇರೋದು... .