Saturday, December 22, 2007

NSS Days...






ಉಪ್ಪಾರಪಳಿಕೆ, ಮಲವಂತಿಗೆಯ ರಸನಿಮಿಷಗಳು...

ಎನ್.ಎಸ್.ಎಸ್ ನಲ್ಲಿ ಕಳೆದ ಆ ದಿನಗಳು ಈಗಲೂ ಕಣ್ಮುಂದೆ ಸುಳಿಯುತ್ತಿದೆ.. ಹತ್ತು ದಿನದ ಶಿಬಿರಗಳ ನೆನಪುಗಳಂತೂ ಮನದಿಂದ ಮಾಸುವುದೇ ಇಲ್ಲ. ಕ್ಯಾಂಪ್ ನ ಆ ರಸನಿಮಿಷಗಳನ್ನು ನೆನೆಯುವಾಗ ಮನಸು ತುಂಬಾ ಹಿಂದಕ್ಕೋಡುತ್ತದೆ. ನಾನಾಗ ಪ್ರಥಮ ಪಿ.ಯು.ಸಿಯಲ್ಲಿದ್ದೆ. ಕಾಲೇಜಿನ ವಾತವರಣಕ್ಕೆ ಹೊಂದಿಕೊಂಡಿದ್ದ ನಾನು ಎನ್.ಎಸ್.ಎಸ್ ಎಂಬ ಕುಟುಂಬದೊಂದಿಗೂ ಬಹುಬೇಗನೆ ಹೊಂದಿಕೊಂಡಿದ್ದೆ..
ನಾನು ಭಾಗವಹಿಸಿದ ಮೊದಲ ಕ್ಯಾಂಪ್ ಉಪ್ಪರಪಳಿಕೆಯದ್ದು. ಗೆಳೆಯ ರಾಜೇಶ್ ನ ಒತ್ತಾಯಕ್ಕೆ ಮಣಿದು ಕ್ಯಾಂಪ್ ಗೆ ಹೋಗಿದ್ದೆ. ಆರಂಭದಲ್ಲಿ ಬೋರ್ ಅನಿಸಿದರೂ ದಿನಕಳೆದಂತೆ ಕ್ಯಾಂಪ್ ನ ನಿಜವಾದ ಸವಿ ಅನುಭವವಾಗತೊಡಗಿತು. ತುಂತುರು ಮಳೆಯ ನಡುವೆ ಶ್ರಮದಾನ. ಜೊತೆಗೆ ಉಳಿದ ಕೆಲಸಗಳೂ.. ನಿಜಕ್ಕೂ ಆ ಸವಿಯನ್ನು ಅನುಭವಿಸಿಯೇ ತೀರಬೇಕು. ದಿನಗಳು ಬಹುಬೇಗನೆ ಮುಂದೆಸಾಗುತ್ತಿತ್ತು. ಇನ್ನೇನು ಕ್ಯಾಂಪ್ ಮುಗಿಯಲು ಒಂದು ದಿನ ಬಾಕಿಯಿರುವಾಗ ಅಗಲುವಿಕೆಯ ನೋವು ಕಾಡತೊಡಗಿದ್ದು ಸುಳ್ಳಲ್ಲ. ಕೊನೆಯ ದಿನದ ಆ ಎನ್.ಎಸ್.ಎಸ್ ಗೀತೆ-"ಇರಲಿ ನೆನಪಿರಲಿ...." ಮರೆಯೋಕೆ ಸಾಧ್ಯವಿಲ್ಲ. ಕಣ್ಣುಗಳಲ್ಲಿ ಹನಿಗಳು ಮೂಡಿತ್ತು... ಗುರುತು ಪರಿಚಯವಿಲ್ಲದವರು ಹತ್ತು ದಿನಗಳಲ್ಲಿ ಅಷ್ಟೊಂದು ಆತ್ಮೀಯರಾಗಲು ಸಾಧ್ಯವೇ ಅನ್ನುವುದು ಅಚ್ಹರಿ ಮೂಡಿಸಿತ್ತು..

ಉಪ್ಪಾರಪಳಿಕೆಯ ಆ ಮೊದಲ ಕ್ಯಾಂಪ್ಸ್ ಇವತ್ತಿಗೂ ನನಗೆ ಅಚ್ಹುಮೆಚ್ಹು.. ಹಲವಾರು ರಸನಿಮಿಷಗಳನ್ನು ನೀಡಿದ ಆ ಕ್ಯಾಂಪ್ ಮನದಿಂದ ಮರೆಯಾಗೋದು ಅಸಾಧ್ಯ....

ಮುಂದಿನ ವರ್ಷ ಮಲವಂತಿಗೆಯಲ್ಲಿ ನಡೆದ ಶಿಬಿರವು ಅವಿಸ್ಮರಣೀಯ ಎಂದರೆ ತಪ್ಪಾಗದು.. ಯಾರನ್ನೋ ಪಡೆದು, ಬಳಿಕ ಕಳೆದುಕೊಂಡ ಅನುಭವ....

ಸುನಿಲ್...

1 comment:

Unknown said...

ಸುತ್ತುತಿರು ಈ ಭೂಮಿಯಲ್ಲಿ ಸತ್ತು ಹೋಗುವದು ನಾವೆಲ್ಲಿ ತಂದಿಲ್ಲ ಎನನ್ನು ಕೊಂಡೋಯುವದಿಲ್ಲ ಯಾವುದನ್ನು ಇದ್ದಷ್ಷು ಹೊತ್ತು ಮರೆಯದಿರಿ ಸವಿ ನೆನಪುಗಳನ್ನು.... ಇಂತಿ ಅಪರಿಚಿತ ಸ್ನೇಹಿತ, ಮಹಾಂತೇಶ ಗು ಮುಗಳಖೋಡ
ಮು.ಪೋ ಹಾರೂಗೇರಿ-591220 ಬೆಳಗಾವಿ ಜಿಲ್ಲೆ.