Saturday, October 23, 2010

ನನ್ನ ದೇವತೆ...

ಮನಸ್ಸಿನ ಗುಡಿಗೋಪುರದೊಳಗೊಂದು ಪುಟ್ಟ ದೇವತೆ..
ಅಪ್ಸರೆಯ ಸೊಬಗು, ಸ್ವರ್ಣ ಮಾಲೆ, ನೆರಿಗೆಯ ಸೀರೆ, ಕನಕಾಂಬರ ಹೂವುಗಳಿಲ್ಲದಿದ್ರು ನನಗವಳು ದೇವತೆಯೇ...
ನೆನೆದಾಗ ಕಣ್ಮುಂದೆ ಬರೋ ನಡೆದಾಡುವ ದೇವತೆ..
ಪ್ರೀತಿ, ಸ್ನೇಹದ ದೀಪ ಹಚ್ಚಿ, ವಿಶ್ವಾಸ ನಂಬಿಕೆಯ ಆರತಿ ಎತ್ತಿ, ಕಾಳಜಿಯ ಪೂಜೆ ಸಲ್ಲಿಸಿ ಆರಾಧಿಸ್ತೀನಿ..
ತುಟಿಯಂಚಿನ ಕಿರುನಗೆ ಮತ್ತು ಪ್ರೀತಿ ತುಂಬಿದ ಮಾತುಗಳೇ ನನಗಾ ದೇವತೆಯ ಪ್ರಸಾದ..

1 comment:

ಕಡಲ ತೀರದ ಕಾಡು ಮಲ್ಲಿಗೆ!! said...

ನಿಮ್ಮನ್ನ ಪ್ರೀತಿಸೋ ಹುಡುಗಿ ಪುಣ್ಯ ಮಾಡಿದ್ಲು:) ಮಳೆ ನೀರಿನಿಂದ ತಿಳಿಯಾದ ಮಣ್ಣಿನಷ್ಟೇ ಶುಭ್ರ ಮತ್ತು ಬೆಚ್ಚಗಿನ ಪ್ರೀತಿಯಾ ಭಾವ ---ಹನಿ ಬಿದ್ದ ಮನ